ಅಮ್ಮಿನಬಾವಿ ಗ್ರಾಮದೇವತೆ ಹುಂಡಿ ಕಳ್ಳತನ: ದೃಶ್ಯ ಸಿಸಿಟಿವಿಯಲ್ಲಿ ಸೆರೆ - CCTV
ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದೇವತೆ ದೇವಸ್ಥಾನದ ಹುಂಡಿ ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಣ ಕದ್ದು ಪುನಃ ಕಳ್ಳ ಹುಂಡಿ ಬಾಗಿಲು ಹಾಕಿದ್ದಾನೆ. ಹೀಗಾಗಿ ಕಳ್ಳತನ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಳ್ಳತನ ನಡೆದಿರುವುದು ಗ್ರಾಮಸ್ಥರಿಗೆ ತಿಳಿದುಬಂದಿದೆ. ಕಳ್ಳತನ ಕುರಿತು ದೇವಸ್ಥಾನ ಮಂಡಳಿ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದೆ.