ಧಾರವಾಡ: ಕೋವ್ಯಾಕ್ಸಿನ್ ವಿತರಣೆ ವೇಳೆ ತಾಂತ್ರಿಕ ದೋಷ, ಲಸಿಕೆ 40 ನಿಮಿಷ ವಿಳಂಬ - ಕೋವ್ಯಾಕ್ಸಿನ್ ವಿತರಣೆ
ಧಾರವಾಡ: ನಗರದ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವ್ಯಾಕ್ಸಿನ್ ಲಸಿಕೆ ನೀಡುವ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಕೆಲ ಸಮಯಗಳ ಕಾಲ ಸಿಬ್ಬಂದಿ ಪೇಚಾಡುವಂತಾಯಿತು. ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ವೇಳೆ ತಾಂತ್ರಿಕ ತೊಂದರೆಯಾದ್ದರಿಂದ 40 ನಿಮಿಷ ವಿಳಂಬವಾಗಿ ಲಸಿಕೆ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಫಾರ್ಮಸಿ ಅಧಿಕಾರಿ ರಾಚಯ್ಯ ಹಿರೇಮಠ ಮೊದಲ ಲಸಿಕೆ ಪಡೆದುಕೊಂಡರು.