ಬಡ ಮಕ್ಕಳ ಆರೋಗ್ಯ ಸುಧಾರಣೆಗೆ ಭಾಗ್ಯದಾತರಾಗಿ ನಿಂತವರಿವರು.. - ಮಂಗಳೂರು ಕೆಎಂಸಿ ಆಸ್ಪತ್ರೆ
ಮಂಗಳೂರು: ಹುಟ್ಟುತ್ತಲೇ ಮೂತ್ರಕೋಶ, ಗುದದ್ವಾರ, ಅನ್ನನಾಳ ಹೀಗೆ ದೇಹದ ಪ್ರಮುಖ ಭಾಗಗಳ ನ್ಯೂನತೆಯಿಂದ ಬಳಲುವವರು ಅಥವಾ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುವ ಎಷ್ಟೋ ಬಡ ರೋಗಿಗಳು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸಾಮರ್ಥ್ಯವಿಲ್ಲದೆ ಸಂಕಷ್ಟಕ್ಕೀಡಾಗಿರುತ್ತಾರೆ. ಇಂತಹ ಗಂಭೀರ ಸಮಸ್ಯೆಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲು ಹತ್ತು ಮಂದಿ ವಿದೇಶಿ ವೈದ್ಯರ ತಂಡ ಮಂಗಳೂರಿಗೆ ಬಂದಿದ್ದು, ಈಗಾಗಲೇ 55 ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸಿದೆ. ಬಂಟ್ವಾಳದ ಅನಂತ ಮಲ್ಯ ಚಾರಿಟಬಲ್ ಟ್ರಸ್ಟ್ ಶಸ್ತ್ರಚಿಕಿತ್ಸೆ ಸಹಿತ ಸಂಪೂರ್ಣ ವೆಚ್ಚ ಭರಿಸಿದರೆ, ಅಮೆರಿಕದ ಹ್ಯೂಸ್ಟನ್‌ನ ಪೀದ್ ಪರಾಯಿ ಇಂಟರ್ನ್ಯಾಷನಲ್ ಸಂಸ್ಥಾಪಕ ಡಾ. ಅಶ್ವಿನಿ ಪಿಂಪಲ್ವರ್ ವೈದ್ಯರ ವ್ಯವಸ್ಥೆ ಮಾಡಿದ್ದಾರೆ. ಹಾಗೆಯೇ ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆ ಮೂಲಸೌಕರ್ಯಗಳ ವ್ಯವಸ್ಥೆ ಮಾಡಿದೆ.
Last Updated : Feb 9, 2020, 10:17 AM IST