ಕೊರೊನಾ ತಡೆಗಟ್ಟಲು ಪೊಲೀಸರ ನೇತೃತ್ವದಲ್ಲಿ ಜನ ಜಾಗೃತಿ ಮೂಡಿಸಿದ ಟೀಂ ಕುಂದಾಪುರಿಯನ್ಸ್ - ಕೊರೊನಾ ಬಗ್ಗೆ ಟೀಂ ಕುಂದಾಪುರಿಯನ್ಸ್ ಜಾಗೃತಿ
ಬೆಂಗಳೂರು: ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿರುವ ಹೊತ್ತಲ್ಲಿ ಟೀಂ ಕುಂದಾಪುರಿಯನ್ಸ್ ತಂಡ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜನ ಜನಜಾಗೃತಿ ಜಾಥಾ ನಡೆಸಿತು. ಕೊರೊನಾ ತಡೆಗಟ್ಟಲು ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ಎಂಬ ಸಂದೇಶವನ್ನ ಜನರಿಗೆ ತಿಳಿಸಲಾಯಿತು. ಹಲಸೂರು ವಿಭಾಗದ ಸ್ಲಮ್ಗಳಿಗೆ ಭೇಟಿ ನೀಡಿ ಕೊರೊನಾ ಹರಡುವ ವಿಧಾನ, ವ್ಯಾಕ್ಸಿನ್ ಬಗ್ಗೆ ಅರಿವು ಮೂಡಿಸಲಾಯ್ತು. ಹಾಗೆಯೇ ಕೊರೊನಾ ಸಾಂಕ್ರಾಮಿಕ ರೋಗ ಬಂದ ಬಳಿಕ ಜನರಲ್ಲಾದ ಬದಲಾವಣೆ ಕುರಿತು ಸಮೀಕ್ಷೆ ನಡೆಸಿ ಸಿಎಂಗೆ ತಲುಪಿಸಲಾಗಿದೆ. ಈ ಸಮಾಜಮುಖಿ ಕಾರ್ಯದಲ್ಲಿ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ, ಎಸಿಪಿ ಕುಮಾರ್, ಹಲಸೂರು ಇನ್ಸ್ ಪೆಕ್ಟರ್ ಮಂಜುನಾಥ್, ನಿವೃತ್ತ ಯೋಧರಾದ ಮುರಳಿ ಮತ್ತು ಭಾಸ್ಕರ್, ಖ್ಯಾತ ವೈದ್ಯ ಅಂಜನಪ್ಪ, ಲೇಖಕಿ ,ರಂಗ ಕಲಾವಿದೆ ವಿನುತಾ ವಿಶ್ವನಾಥ್ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ರು.