ಜೈಲು ಹಕ್ಕಿಗಳಿಗೆ ಪಾಠ ಮಾಡಿದ ಶಿಕ್ಷಕಿ: ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಕೈದಿಗಳು! - ವಿಚಾರಣಾಧೀನ ಕೈದಿಗಳಿಗೆ ಪಾಠ
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳುವುದೇ ದೊಡ್ಡ ಸಮಸ್ಯೆ. ಅಂತಹದರಲ್ಲಿ ಜೈಲಿನಲ್ಲಿರುವ ಕೈದಿಗಳಿಗೆ ಪಾಠ ಮಾಡುವುದು ಅಂದರೆ ಅದು ಸುಲಭದ ಮಾತಲ್ಲ. ಆದಾಗ್ಯೂ ಹಾವೇರಿ ನಗರದಲ್ಲೊಬ್ಬ ಶಿಕ್ಷಕಿ ಅದನ್ನು ಸಾಧ್ಯವಾಗಿಸಿದ್ದಾರೆ. ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಪಾಠ ಮಾಡುವ ಜೊತೆ ಜೊತೆಗೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಅನಕ್ಷರಸ್ಥ ಕೈದಿಗಳ ಬಾಳಿಗೆ ದಾರಿದೀಪವಾಗಿದ್ದಾರೆ. ಯಾರು ಈ ಶಿಕ್ಷಕಿ ಅಂತೀರಾ ಈ ವರದಿ ನೋಡಿ.