ಮನೆಬಾಗಿಲಿಗೆ ಬಂದು ಶಿಕ್ಷಕರಿಂದ ಪಾಠ:ಪಾಲಕರಲ್ಲಿ ದೂರಾದ ಆತಂಕ! - ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾಗಮ ಕಾರ್ಯಕ್ರಮ
ಮಹಾಮಾರಿ ಕೊರೊನಾದಿಂದಾಗಿ ಶಾಲೆಗಳು ಮುಚ್ಚಿ ಐದಾರು ತಿಂಗಳುಗಳೇ ಕಳೆದಿವೆ. ನಿತ್ಯ ಶಾಲೆಗೆ ತೆರಳಿ ಪಾಠ ಕೇಳಬೇಕಿದ್ದ ಮಕ್ಕಳು ಮನೆಯಲ್ಲಿಯೇ ಆಟ ಆಡಿಕೊಂಡು ಕಾಲಹರಣ ಮಾಡುತ್ತಿದ್ದು, ಇದು ಪಾಲಕರ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾಗಮ ಕಾರ್ಯಕ್ರಮದಡಿ ಮನೆಬಾಗಿಲಿಗೆ ಶಿಕ್ಷಕರನ್ನು ಕಳುಹಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದು, ಈ ಮೂಲಕ ಮಕ್ಕಳನ್ನು ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ನಡೆಸಿದೆ.