ಕರ್ನಾಟಕ

karnataka

ETV Bharat / videos

ರಾಣೆಬೆನ್ನೂರಿನಲ್ಲಿ ಶಾಲಾರಂಭ; ಪ್ರಥಮ ದಿನ ಕೆಲವೆಡೆ ಕಡಿಮೆ ಹಾಜರಾತಿ - ರಾಣೆಬೆನ್ನೂರಿನಲ್ಲಿ ತರಗತಿ ಪ್ರಾರಂಭಿಸಿದ ಶಿಕ್ಷಕರು

By

Published : Jan 1, 2021, 3:56 PM IST

ರಾಣೆಬೆನ್ನೂರು: ಸರ್ಕಾರದ ಆದೇಶದಂತೆ ತಾಲೂಕಿನಲ್ಲಿ ಇಂದು ಶಾಲಾ-ಕಾಲೇಜುಗಳು ಆರಂಭವಾಗಿವೆ. ಆದರೆ ಕೆಲ ಶಾಲೆಗಳಲ್ಲಿ ಶಾಲಾರಂಭದ ಪ್ರಥಮ ದಿನದಂದು ಕೆಲವೇ ವಿದ್ಯಾರ್ಥಿಗಳು ಮಾತ್ರ ಆಗಮಿಸಿದ್ದರು. ಆದರೂ ಆಗಮಿಸಿದ ಮಕ್ಕಳನ್ನು ಸಂತಸ, ಸಂಭ್ರಮದಿಂದ ಸ್ವಾಗತಿಸಿದ ಶಿಕ್ಷಕರು ತರಗತಿ ಆರಂಭಿಸಿದ್ದಾರೆ. ಸದ್ಯ ರಾಜ್ಯಾದ್ಯಂತ ಹೊಸ ವರ್ಷದ ದಿನದಂದು ಶಾಲೆಗಳ ಬಾಗಿಲು ತೆರೆದಿದ್ದು, ತಳಿರು ತೋರಣಗಳಿಂದ ಮಕ್ಕಳಿಗೆ ಸ್ವಾಗತ ನೀಡಿವೆ. ನಗರದ ಶಾಸಕರ ಮಾದರಿ ಶಾಲೆಯಲ್ಲಿ ಸುಮಾರು 20 ಮಕ್ಕಳು ಆಗಮಿಸಿದ ಹಿನ್ನೆಲೆ ಶಿಕ್ಷಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಪಾಠ ಹೇಳಿಕೊಡುತ್ತಿದ್ದಾರೆ.

ABOUT THE AUTHOR

...view details