’ನಿಗೂಢ ಸಿಡಿ ಯಾರ ಹತ್ತಿರ ಇರಲ್ಲ ಅಂದ್ರೂ ನಮ್ ಸ್ನೇಹಿತ ವಿಶ್ವನಾಥ್ ಹತ್ರ ಇದ್ದೇ ಇರುತ್ತೆ’: ಜಯಚಂದ್ರ - ಯತ್ನಾಳ್
ತುಮಕೂರು: ಸಚಿವ ಸಂಪುಟ ವಿಸ್ತರಣೆಯಾದ ನಂತರದಲ್ಲಿ ಭಾರೀ ಚರ್ಚೆಗೆ ಒಳಗಾಗಿರುವ ನಿಗೂಢ ಸಿಡಿಯು ಯಾರ್ ಹತ್ತಿರ ಇರಲ್ಲ ಅಂದರೂ ನಮ್ ಸ್ನೇಹಿತ ವಿಶ್ವನಾಥ್ ಹತ್ರ ಸಿಡಿ ಇದ್ದೆ ಇರುತ್ತೆ ಎಂದು ಮಾಜಿ ಸಚಿವ ಟಿಬಿ ಜಯಚಂದ್ರ ತುಮಕೂರಿನಲ್ಲಿ ಹೇಳಿದ್ದಾರೆ. ಪತ್ರಿಕೆಗಳಲ್ಲಿ ಸಿಡಿ ಇದೆ ಎಂಬುದು ಬರ್ತಿದೆ, ಯತ್ನಾಳ್ ಸಿಡಿ ನನ್ ಹತ್ರ ಇದ್ದಿದ್ದಿದ್ರೆ ನಾನು ಮುಖ್ಯಮಂತ್ರಿನೋ ಉಪಮುಖ್ಯಮಂತ್ರಿನೋ ಆಗ್ತಿದ್ದೆ ಅಂತ ಹೇಳಿದ್ದಾರೆ. ಇದೆಲ್ಲಾ ಹೊರಗೆ ಬರಲಿಕ್ಕೆ ಪ್ರಾರಂಭವಾಗುತ್ತಿದೆ ಬರಲಿ. ಇಷ್ಟು ಬಹಿರಂಗವಾಗಿ ಮಾತನಾಡಿದ ಮೇಲೆ ಬಂದೇ ಬರುತ್ತೆ. ಅದರಲ್ಲಿ ಏನಿದೆ ಯಾರ್ ಯಾರ್ ಪಾತ್ರ ಇದೆ ಎಂಬುದು ರಾಜ್ಯಕ್ಕೆ ಗೊತ್ತಾಗಲಿದೆ ಎಂದರು.