ಹುಲಿ ಮತ್ತು ಸಿಂಹಧಾಮಕ್ಕೆ ಕೊರೋನಾ ಎಫೆಕ್ಟ್... ಒಂದು ವಾರ ಇರೋದಿಲ್ಲ ಸಫಾರಿ - Shimoga news
ಕೋವಿಡ್-19 ನಿಂದಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆಯ ಕ್ರಮವಾಗಿ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಜನ ಸೇರುವ ಜಾಗಗಳಲ್ಲಿ ಜನರ ಪ್ರವೇಶವನ್ನು ನಿಷೇಧ ಮಾಡಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಪ್ರವೇಶ ನಿಷೇಧಿಸಿದೆ. ಇಲ್ಲಿಗೆ ಸ್ಥಳೀಯರು ಸೇರಿದಂತೆ ವಿದೇಶಿಗರು ಸಹ ಆಗಮಿಸುತ್ತಾರೆ. ಹುಲಿ ಮತ್ತು ಸಿಂಹಧಾಮವನ್ನು ಮಾರ್ಚ್ 15 ರಿಂದ 23 ರ ತನಕ ಪ್ರವೇಶ ನಿಷೇಧ ಮಾಡಿದೆ. ನಿತ್ಯ 300 ರಷ್ಟು ಪ್ರವಾಸಿಗರು ಆಗಮಿಸುತ್ತಿದ್ದರು. ವಾರದ ಅಂತ್ಯಕ್ಕೆ 800 ರಿಂದ 1,000ವರೆಗೆ ಆಗಮಿಸುತ್ತಿದ್ದ ಪ್ರವಾಸಿಗರ ಸಂಖ್ಯೆ ಕೊರೋನಾ ಕಾರಣದಿಂದ ಇಳಿಮುಖವಾಗಿದೆ. ಇನ್ನು ಇಲ್ಲಿ ಪ್ರವಾಸಿಗರಿಗೆ ಮಾತ್ರ ನಿಷೇಧವಿದೆ. ಮೃಗಾಲಯ ಸಿಬ್ಬಂದಿ ಎಂದಿನಂತೆ ಕರ್ತವ್ಯಕ್ಕೆ ಆಗಮಿಸುತ್ತಿದ್ದಾರೆ. ಅವರಿಗೂ ಮೃಗಾಲಯದ ವತಿಯಿಂದ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಕುರಿತು ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ್ ಚಂದ್ರೊಂದಿಗೆ ನಮ್ಮ ಶಿವಮೊಗ್ಗ ಪ್ರತಿನಿಧಿ ಕಿರಣ್ ಕುಮಾರ್ ನಡೆಸಿರುವ ವಾಕ್ ಥ್ರೂ ಇಲ್ಲಿದೆ..