ಪ್ರಧಾನಿ ಹೇಳಿದಂತೆ ದೀಪ ಹಚ್ಚುವ ಮೂಲಕ ಅಂಧಕಾರ ಓಡಿಸೋಣ: ನಟಿ ತಾರಾ
ಏಪ್ರಿಲ್ 5 ರಂದು ನಾವೆಲ್ಲಾ ದೀಪ ಬೆಳಗಿಸುವ ಮೂಲಕ ಕೊರೊನಾ ವಿರುದ್ಧ ಹೋರಾಟ ಮಾಡೋಣ ಎಂದು ನಟಿ ಮತ್ತು ರಾಜಕಾರಣಿ ತಾರಾ ಅನುರಾಧ ಜನರಲ್ಲಿ ಮನವಿ ಮಾಡಿದ್ದಾರೆ. ಸಾವಿರಾರು ವರ್ಷಗಳ ಹಿಂದಿನಿಂದಲೂ ನಮ್ಮ ಹಿರಿಯರು, ಋಷಿ ಮುನಿಗಳು ಇದನ್ನೇ ಹೇಳಿದ್ದು, ದೀಪ ಹಚ್ಚುವ ಮೂಲಕ ಅಂಧಕಾರ ಓಡಿಸೋಣ. ಕೊರೊನಾ ನಾಶವಾಗಲಿ, ದೇಶ ಬಿಟ್ಟು ತೊಲಗಲಿ ಎಂದು ಪ್ರಾರ್ಥಿಸೋಣ ಅವರು ಹೇಳಿದರು.