ಮೂಲ ಸಂಸ್ಕೃತಿ ಬಿಡದ ತಾಲೂಕು ಪಂಚಾಯತಿ ಅಧ್ಯಕ್ಷೆ: ಮಂಡ್ಯದ ಈ ಮಹಿಳೆ ಎಲ್ಲರಿಗೂ ಮಾದರಿ - ಮಡಿ
ಮಂಡ್ಯ : ಮಂಡ್ಯ ತಾಲೂಕು ಪಂಚಾಯತಿ ಅಧ್ಯಕ್ಷೆ ಶೈಲಜಾ ಅವರು ತಮ್ಮ ಮೂಲ ಸಂಸ್ಕೃತಿ ಬಿಟ್ಟಿಲ್ಲ. ಸಂತೆ ಕಸಲಗೆರೆಯ ಶೈಲಜಾ ತಿಮ್ಮಯ್ಯ ಸದ್ಯಕ್ಕೆ ಮಂಡ್ಯ ತಾಲೂಕು ಪಂಚಾಯತಿ ಅಧ್ಯಕ್ಷೆಯಾಗಿದ್ದಾರೆ. ಮದುವೆ ಮನೆಯಲ್ಲಿ ಮಡಿಯನ್ನು ಹಾಸುವ ಕಾಯಕವನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ ಇವರೇ ಖುದ್ದಾಗಿ ಹೋಗಿ ಮಡಿ ಹಾಸುತ್ತಾರೆ.