ಕೋವಿಡ್ ಬೆಡ್ ಬ್ಲಾಕ್ ಮಾರ್ಕೆಟ್ ಸೃಷ್ಟಿಸಿದವರಿಗೆ ಕಠಿಣ ಶಿಕ್ಷೆಯಾಗಲಿ : ಸಿ ಟಿ ರವಿ - ಸಿಟಿ ರವಿ
ಚಿಕ್ಕಮಗಳೂರು : ಮೊದಲು ಮೆಡಿಕಲ್ ಸೀಟ್ ಬ್ಲಾಕ್ ಕೇಳಿದ್ದೆ. ಆದರೆ, ಇಂತಹ ವಿಷಮ ಸಂದರ್ಭದಲ್ಲಿ ಕೋವಿಡ್ ಬೆಡ್ ಬ್ಲಾಕ್ ಮಾಡಿ ಬ್ಲಾಕ್ ಮಾರ್ಕೆಟ್ ಸೃಷ್ಟಿಸುವ ಪಾಪಿಗಳನ್ನ ಈಗಲೇ ಕೇಳಿದ್ದು, ಅವರು ಯಾವುದರಲ್ಲೂ ಪ್ರಾಯಶ್ಚಿತ ಮಾಡಿಕೊಳ್ಳಲು ಆಗಲ್ಲ. ಅವರಿಗೆ ಕಠಿಣ ಶಿಕ್ಷೆಯಾಗೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆಗ್ರಹಿಸಿದ್ದಾರೆ. ಈ ದಂದೆಯ ಹಿಂದೆ ಯಾರೆಲ್ಲಾ ಇದ್ದಾರೆ, ಇದಕ್ಕೆಲ್ಲ ಯಾರು ಕಾರಣ ಎಂಬುದನ್ನು ಸರ್ಕಾರ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಮಾಡಬೇಕು ಎಂದಿದ್ದಾರೆ.