ಅನರ್ಹ ತೀರ್ಪು ಸ್ವಾಗತಾರ್ಹ: ಮತದಾರರೇ ನಮ್ಮ ಶಕ್ತಿ ಎಂದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ - ಹುಣಸೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಪಿ ಮಂಜುನಾಥ್ ಪ್ರತಿಕ್ರಿಯೆ
ಮೈಸೂರು: ಅನರ್ಹರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಆದೇಶ ಸಿಕ್ಕಿರಬಹುದು. ಆದ್ರೆ, ಜನಾದೇಶ ಸಿಗುವುದು ಕಷ್ಟವಿದೆ ಎಂದು ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್. ಪಿ. ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ. ಹುಣಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಕೋರ್ಟು ಅನರ್ಹರಿಗೂ ಅವಕಾಶ ಕೊಟ್ಟಿದೆ. ತೀರ್ಪು ಏನೇ ಬಂದರೂ ನಮ್ಮ ಕಾರ್ಯಕರ್ತರು, ಮತದಾರರು ಅನರ್ಹರಿಗೆ ಬುದ್ಧಿ ಕಲಿಸಲು ಸನ್ನದ್ಧರಾಗಿದ್ದಾರೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.