ಧಾರವಾಡದಲ್ಲಿ ಬಂದ್ಗೆ ಬೆಂಬಲ: ಸಭೆ ಬಳಿಕ ಕೆಲಸಕ್ಕೆ ಹಾಜರಾಗುವ ಬಗ್ಗೆ ತೀರ್ಮಾನ - ಸಾರಿಗೆ ನೌಕರರ ಮುಷ್ಕರ ಸುದ್ದಿ 2020
ಧಾರವಾಡ: ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬಸ್ ಸಂಚಾರ ಬಂದ್ ಇರುವ ಕಾರಣ ಸಾರ್ವಜನಿಕರು ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ. ಉಪನಗರ ಹಾಗೂ ಗ್ರಾಮಾಂತರ ಘಟಕದ ಬಸ್ಗಳನ್ನು ಡಿಪೋದಲ್ಲಿ ನಿಲ್ಲಿಸಲಾಗಿದೆ. ಬಸ್ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಕೆಎಸ್ಆರ್ಟಿಸಿ ಡಿಸಿ ಬಸಲಿಂಗಪ್ಪ ಬೀಡಿ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.