ವಿಡಿಯೋ ಮೂಲಕ ಉ.ಕ ಜವಾರಿ ಭಾಷೆಯಲ್ಲೇ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಸುನಿಲ್ ಜೋಶಿ! - Sunil Joshi relished his childhood days
ಗದಗ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿರುವ ಭಾರತ ತಂಡದ ಮಾಜಿ ಸ್ಪಿನ್ನರ್ ಗದಗದ ಸುನಿಲ್ ಜೋಶಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ವಿಡಿಯೋವೊಂದನ್ನು ತಮ್ಮೂರಿನ ವಕೀಲಚಾಳ್ ವಾರಿರ್ಯಸ್ ವಾಟ್ಸಪ್ ಗ್ರೂಪಿನಲ್ಲಿ ಹಾಕಿದ್ದಾರೆ. ವಿಡಿಯೋದಲ್ಲಿ ತಾನು ಹುಟ್ಟಿ ಬೆಳೆದ ವಕೀಲಚಾಳ್ ಬಡಾವಣೆಯ ಕುರಿತು ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲೇ ಮಾತನಾಡಿದ್ದು ಇಲ್ಲಿನ ಜನರ ಸಂತೋಷಕ್ಕೆ ಕಾರಣವಾಗಿದೆ.
Last Updated : Mar 12, 2020, 9:47 AM IST