ಸಂಡೆ ಲಾಕ್‌ಡೌನ್‌ಗೆ ಮೌನವಾದ ಸಾಂಸ್ಕೃತಿಕ ನಗರಿ ಮೈಸೂರು - Lockdown order custody
ಮೈಸೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ಭಾನುವಾರ ಸಂಪೂರ್ಣ ಲಾಕ್‌ಡೌನ್‌ನ ಪೈಕಿ ಇದು ಎರಡನೇ ಭಾನುವಾರವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಸಂಪೂರ್ಣ ಸ್ತಬ್ಧವಾಗಿದೆ. ವಾಣಿಜ್ಯ ಕೇಂದ್ರಗಳಾದ ದೇವರಾಜ ಮಾರುಕಟ್ಟೆ, ಎಪಿಎಂಸಿ, ದೇವರಾಜ ಅರಸು ರಸ್ತೆ, ಕಾಳಿದಾಸ ರಸ್ತೆ, ಅಶೋಕ ರಸ್ತೆ, ಹಳೆ ಸಂತೆಪೇಟೆ ರಸ್ತೆ ಹೀಗೆ 90 ಕ್ಕೂ ಹೆಚ್ಚು ವಾಣಿಜ್ಯ ರಸ್ತೆಗಳಲ್ಲಿ ಅಂಗಡಿಗಳು ಬಂದ್ ಆಗಿವೆ. ಅಲ್ಲದೇ ಸರ್ಕಾರದ ಸೂಚನೆಯಂತೆ ಆಟೋ, ಟ್ಯಾಕ್ಸಿ, ಸಾರಿಗೆ ಬಸ್ ಗಳು ರಸ್ತೆಗಿಳಿಯದೇ ಪರಿಸರ ಮಾಲಿನ್ಯಕ್ಕೆ ಕೊಂಚ ವಿರಾಮ ನೀಡಿದಂತೆ ಭಾಸವಾಗುತ್ತಿದೆ.