ಭಾನುವಾರದ ಲಾಕ್‌ಡೌನ್: ಗುಮ್ಮಟ ನಗರಿಯಲ್ಲಿ ಉತ್ತಮ ಪ್ರತಿಕ್ರಿಯೆ - ವಿಜಯಪುರ ಕೊರೊನಾ ಲಾಕ್ ಡೌ್ನ್
ವಿಜಯಪುರ: ಭಾನುವಾರದ ಲಾಕ್ಡೌನ್ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಡಿದೆ. ಕೆಎಸ್ಆರ್ಟಿಸಿ ಹಾಗೂ ಸಿಟಿ ಬಸ್‌ಗಳ ಸಂಚಾರವಿಲ್ಲದೆ ಕೇಂದ್ರ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಮುಂಜಾನೆ ಬೆಂಗಳೂರಿನಿಂದ ಬಂದ ಕೆಲ ಪ್ರಯಾಣಿಕರು ಬೇರೆ ಊರುಗಳಿಗೆ ತೆರಳಲು ಪರದಾಡಬೇಕಾಯಿತು. ನಗರದ ಗಾಂಧಿ ಚೌಕ್, ಇಬ್ರಾಹಿಂಪುರ, ಹುಡ್ಕೋ ಸೇರಿದಂತೆ ಎಲ್ಲಾ ಪ್ರದೇಶಗಳು ಸ್ತಬ್ಧವಾಗಿವೆ.