ಕೊರೊನಾ ಲಾಕ್‌ಡೌನ್‌ಗೆ ಸಾಂಸ್ಕೃತಿಕ ನಗರಿ ಮೌನ - Sunday Lock down
ಕೊರೊನಾ ನಿಯಂತ್ರಿಸಲು ಪ್ರತೀ ಭಾನುವಾರ ಸರ್ಕಾರ ಲಾಕ್‌ಡೌನ್ ಘೋಷಿಸಿದ್ದು, ಸಾಂಸ್ಕೃತಿಕ ನಗರಿ ಇಂದು ಸ್ತಬ್ಧವಾಗಿದೆ. ನಗರದ ದೇವರಾಜ ಮಾರುಕಟ್ಟೆ, ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಕಾಳಿದಾಸ ರಸ್ತೆ ಹಾಗು ಶಿವರಾಂಪೇಟೆ ರಸ್ತೆಗಳು ಬಿಕೋ ಎನ್ನುತ್ತಿವೆ. ಎಲ್ಲಾ ಅಂಗಡಿಗಳು ಬಂದ್ ಆಗಿವೆ. ಬಸ್ ಸೇರಿದಂತೆ ಯಾವುದೇ ವಾಹನಗಳು ರಸ್ತೆಗಿಳಿದಿಲ್ಲ.