ಭಾನುವಾರದ ಲಾಕ್‌ಡೌನ್‌ಗೆ ಪುತ್ತೂರು ಸಂಪೂರ್ಣ ಸ್ತಬ್ಧ - ಪುತ್ತೂರು ಸಂಡೇ ಕರ್ಫ್ಯೂ
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಾದ್ಯಂತ ಸಂಡೇ ಕರ್ಫ್ಯೂ ಜಾರಿ ಮಾಡಿದೆ.ದ.ಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ ಲಾಕ್ಡೌನ್ ಸಂಪೂರ್ಣ ಯಶಸ್ವಿಯಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ಬಂದ್ ಆಗಿದ್ದವು. ಅನವಶ್ಯಕ ಸಂಚಾರವನ್ನು ತಡೆಯಲು ದರ್ಬೆ, ಕೆಮ್ಮಾಯಿ, ಬೈಪಾಸ್ ರಸ್ತೆ, ಹಾರಾಡಿ, ಸಾಲ್ಮರ ಕ್ರಾಸ್, ನೆಹರುನಗರ, ಕಬಕ ಕಡೆಗಳಲ್ಲಿ ಪೊಲೀಸರು ಪಹರೆ ಕಾಯುತ್ತಿದ್ದಾರೆ.