ಸಂಡೇ ಲಾಕ್ಡೌನ್... ಹಾವೇರಿಯಲ್ಲಿ ಬಿಕೋ ಎನ್ನುತ್ತಿವೆ ರಸ್ತೆಗಳು - ಹಾವೇರಿ ಸುದ್ದಿ
ಹಾವೇರಿ: ರಾಜ್ಯಾದ್ಯಂತ ಇಂದು ಕರ್ಫ್ಯೂ ಇರುವ ಹಿನ್ನೆಲೆ, ನಗರದಲ್ಲಿ ಅಗತ್ಯ ಸೇವೆಗಳನ್ನ ಹೊರತುಪಡಿಸಿ ಉಳಿದ ಎಲ್ಲ ಸೇವೆಗಳನ್ನ ಬಂದ್ ಮಾಡಲಾಗಿದೆ. ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿವೆ. ರಸ್ತೆಗಳಲ್ಲಿ ಜನಸಂಚಾರ ಬಹುತೇಕ ಕಡಿಮೆಯಾಗಿದ್ದು, ಹಾಲು, ಪೇಪರ್ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಎಂದಿನಂತಿದೆ.