ಸೆಲ್ಫಿ ಕ್ರೇಜ್‌ಗೆ ಯುವತಿ ಬಲಿ.. ಹರಿಯುವ ನೀರಿನೊಳಗೆ ಜಾರಿ ಬಿದ್ದು ದುರ್ಮರಣ.. ವಿಡಿಯೋ ವೈರಲ್ - ನೀರಿನಲ್ಲಿ ಕೊಚ್ಚಿಹೋದ ಯುವತಿ
ಸುಂದೇರ್ಗರ್ (ಒಡಿಶಾ): ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಹರಿಯುವ ನೀರಿಗೆ ಜಾರಿ ಬಿದ್ದು ಯುವತಿ ಕೊಚ್ಚಿ ಹೋದ ಘಟನೆ ಜ.3ರಂದು ರಾಜಗಂಗ್‌ಪುರ ಪಟ್ಟಣದ ಕುಂಭಾರ್ ಪಾದದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ನಿರುಪಮಾ ಪ್ರಜಾಪತಿ ಮೃತ ಯುವತಿ. ಅಪಾಯಕಾರಿ ನೀರಿನ ಹರಿವಿನ ಪಕ್ಕದಲ್ಲಿ ದುರ್ಬಲ ಕಲ್ಲಿನ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಆಕೆಯ ಪಕ್ಕದ ಕಲ್ಲಿನ ಮೇಲೆ ಬರಲು ಯತ್ನಿಸಿದ. ಆಗ ಅನುಪಮಾ ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಆ ಸ್ಥಳದಿಂದ 300 ಮೀಟರ್ ದೂರದಲ್ಲಿ ಆಳವಾದ ನೀರಿನಲ್ಲಿ 22 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಮೀನುಗಾರರಿಗೆ ಮೃತದೇಹ ಪತ್ತೆಯಾಗಿದೆ.
Last Updated : Jan 11, 2021, 10:26 PM IST