ಕುರುಗೋಡು ದೊಡ್ಡ ಬಸವೇಶ್ವರ ಮೂರ್ತಿಗೆ ತಾಕಿದ ಸೂರ್ಯ ರಶ್ಮಿ! ವಿಡಿಯೋ - ಯುಗಾದಿ ಹಬ್ಬ
ಬಳ್ಳಾರಿ: ಯುಗಾದಿ ಹಬ್ಬದಂದು ಸಂಜೆ ಹೊತ್ತಿಗೆ ಗಣಿನಾಡು ಬಳ್ಳಾರಿ ಜಿಲ್ಲೆಯ ಕುರುಗೋಡಿನ ಆರಾಧ್ಯ ದೈವ ದೊಡ್ಡಬಸವೇಶ್ವರ ಮೂರ್ತಿಗೆ ಸೂರ್ಯನ ರಶ್ಮಿ ತಾಕಿದೆ. ಸೂರ್ಯನ ಕಿರಣಗಳು ನೇರವಾಗಿ ಕುರುಗೋಡು ದೊಡ್ಡಬಸವೇಶ್ವರ ಮೂರ್ತಿ ಹಾಗೂ ಈಶ್ವರನ ಮೂರ್ತಿಗೆ ಬೀಳಲಾರಂಭಿಸಿವೆ. ದೇಗುಲಕ್ಕೆ ಆಗಮಿಸಿದ್ದ ಭಕ್ತರಿಗೆ ಸೂರ್ಯನ ಕಿರಣಗಳು ಬಿದ್ದಿರೋದನ್ನ ಕಣ್ಣಾರೆ ಕಂಡು ಆನಂದಿಸಿದ್ದಾರೆ. ಅಂದಾಜು 2.50 ನಿಮಿಷದ ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮುಖೇನ ಕೃತಾರ್ಥರಾದರು. 'ಯುಗಾದಿ ದಿನದಂದು ಸಂಜೆ 5.50 ಸಮಯದಲ್ಲಿ ದೊಡ್ಡ ಬಸವೇಶ್ವರ ಸ್ವಾಮಿ ಮತ್ತು ಈಶ್ವರ ಮೂರ್ತಿಗೆ ಸೂರ್ಯಕಿರಣಗಳು ಸ್ಪರ್ಶಿಸಿದ ಕ್ಷಣಗಳನ್ನ ನೋಡಿದ ನಾವು ಪುಣ್ಯವಂತರು' ಎಂಬುದು ಭಕ್ತರ ಅಭಿಪ್ರಾಯವಾಗಿದೆ.