ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾವನ್ನು ನಾನು ನೋಡಿಲ್ಲ ಎಂದ ಸುಮಲತಾ ಅಂಬರೀಶ್..! - ಸಂಸದೆ ಸುಮಲತಾ ಅಂಬರೀಶ್
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಜಾಲ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ. ನಟಿ ರಾಗಿಣಿ ದ್ವಿವೇದಿ ಹೆಸರು ಕೂಡ ಡ್ರಗ್ಸ್ ಮಾಫಿಯಾದಲ್ಲಿ ತಳಕು ಹಾಕಿಕೊಂಡಿದ್ದು, ಈಗ ಬೇರೆ ನಟ-ನಟಿಯರಿಗೆ ನಡುಕ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ ಅಂಬರೀಶ್, ನಲವತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಇದ್ದೇನೆ. ನಾನು ಯಾವತ್ತು ಚಿತ್ರರಂಗದಲ್ಲಿ ಡ್ರಗ್ಸ್ ಜಾಲ ನೋಡಿಲ್ಲ. ಆದರೆ, ಡ್ರಗ್ಸ್ ಇದೆ ಎಂಬ ಕಹಿ ಸತ್ಯವನ್ನ ಒಪ್ಪಿಕೊಳ್ಳುತ್ತೆನೆ.ಆದರೆ, ಯಾವ ಫ್ರೂಪ್ ಇಲ್ಲದೆ ಬೇರೆಯವರಿಗೆ ತೊಂದರೆ ಕೊಡಬಾರದು ಎಂದಿದ್ದಾರೆ.
Last Updated : Sep 4, 2020, 11:20 AM IST