ಬೆಂಬಲ ಬೆಲೆ ಸಿಗದೇ ಕಂಗಾಲಾದ ಕಬ್ಬು ಬೆಳೆಗಾರ - ಮಕರ ಸಂಕ್ರಾಂತಿ ಸಂಭ್ರಮ
ಮೈಸೂರು: ರಾಜ್ಯದಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಆದರೆ ಇಲ್ಲೊಬ್ಬ ಕಬ್ಬು ಬೆಳೆದ ರೈತರ ನೋವು ಹೇಳತೀರದಾಗಿದೆ. ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಕಬ್ಬು ಬೆಳೆಗಾರರು ಕಂಗಾಲಾಗಿದ್ದಾರೆ. ಶುಗರ್ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2,800 ರೂ. ನಿಗದಿ ಮಾಡಿವೆ. ಇದರಿಂದಾಗಿ ರೈತರಿಗೆ ನಷ್ಟ ಉಂಟಾಗಿದ್ದು, ಹಾಕಿದ ಬಂಡವಾಳವನ್ನು ತೆಗೆಯುವುದೇ ದೊಡ್ಡ ಸವಾಲಾಗಿದೆ. ಈ ಕುರಿತು ಮೊಸಂಬಾಯನಹಳ್ಳಿಯ ಕಬ್ಬು ಬೆಳೆಗಾರ ಶಿವರಾಜ್ ತಮ್ಮ ಅಳಲು ತೋಡಿಕೊಂಡಿದ್ದಾರೆ.