ಚಿಂಟು ವಿ ಮಿಸ್ ಯೂ: ರಿಷಿ ನಿಧನಕ್ಕೆ ನಿರ್ಮಾಪಕ ಸುಭಾಷ್ ಘಾಯ್ ಕಂಬನಿ - ರಿಷಿ ಕಪೂರ್ ಲೇಟೆಸ್ಟ್ ನ್ಯೂಸ್
ಖ್ಯಾತ ಬಾಲಿವುಡ್ ನಟ ರಿಷಿ ಕಪೂರ್ ನಿಧನಕ್ಕೆ ನಿರ್ಮಾಪಕ ಸುಭಾಶ್ ಘಾಯ್ ಕಂಬನಿ ಮಿಡಿದಿದ್ದಾರೆ. ಎಲ್ಲರಿಗೂ ಅವನು ರಿಷಿ ಕಪೂರ್ ಆದರೆ ನನಗೆ ಮಾತ್ರ ಆತ ಪ್ರೀತಿಯ ಚಿಂಟು. ಅವನ ಸಾವಿನ ಸುದ್ದಿ ನನಗೆ ಶಾಕ್ ನೀಡಿದೆ. ಅದರಿಂದ ಹೊರಬರಲು ಆಗುತ್ತಿಲ್ಲ. 40 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಅವರ ವರ್ಚಸ್ಸು ಹಾಗೇ ಇತ್ತು. ಹಿಂದೂಸ್ಥಾನದ ಐದು ಸರ್ವೋತ್ತಮ ನಟರಲ್ಲಿ ರಿಷಿ ಕಪೂರ್ ಕೂಡ ಒಬ್ಬ. ಕಳೆದ ತಿಂಗಳಷ್ಟೇ ಅವನನ್ನು ಭೇಟಿ ಮಾಡಿದ್ದೆ. ಅನಾರೋಗ್ಯವಿದ್ದರೂ ಮತ್ತೆ ಸಿನಿಮಾ ಮಾಡುವ ನಾನು ರೆಡಿ ಎಂದಿದ್ದ. ಈಗ ನಮ್ಮನ್ನೆಲ್ಲಾ ಅಗಲಿದ್ದಾನೆ ಚಿಂಟು ವಿ ಆಲ್ ಲವ್ ಯೂ ಅಂತ ರಿಷಿ ಕಪೂರ್ ನಿಧನಕ್ಕೆ ಸುಭಾಶ್ ಘಾಯ್ ಸಂತಾಪ ಸೂಚಿಸಿದ್ದಾರೆ.