ದೇಶಕ್ಕೆ ಸುಭಾಷ್ ಚಂದ್ರ ಬೋಸ್ ಕೊಡುಗೆ ಅಪಾರ : ರಾಷ್ಟ್ರಪತಿ ಪದಕ ವಿಜೇತ ಸೋಮಶಂಕರ್ - Celebration of Subhash Chandra Bose in Kolar
ಕೋಲಾರ: ದೇಶಕ್ಕೆ ಸುಭಾಷ್ ಚಂದ್ರ ಬೋಸ್ ನೀಡಿರುವ ಅಮೂಲ್ಯ ಕೊಡುಗೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ಬೆರಳಚ್ಚು ತಜ್ಞ ಹಾಗೂ ರಾಷ್ಟ್ರಪತಿ ಪದಕ ವಿಜೇತ ವಂದೇಮಾತರಂ ಸೋಮಶಂಕರ್ ಹೇಳಿದರು. ನಗರದ ಗಾಂಧಿವನದ ಬಳಿ ಯುವ ಬ್ರಿಗೇಡ್ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜನ್ಮದಿನಾಚರಣೆ ಅಂಗವಾಗಿ ನಡೆದ "ಜೈ ಹಿಂದ್ ರನ್" ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ನೇತಾಜಿ ರೀತಿಯಲ್ಲಿಯೇ ನಾವೆಲ್ಲ ಪರಸ್ಪರ ಭೇಟಿಯಾದಾಗ, ದೂರವಾಣಿಯಲ್ಲಿ ನಮಸ್ಕಾರ ಬದಲಿಗೆ ಜೈ ಹಿಂದ್ ಎಂದು ವಾಚಿಸಬೇಕು ಎಂದು ಕೋರಿದರು.
TAGGED:
ಬೆರಳಚ್ಚು ತಜ್ಞ ಸೋಮಶಂಕರ್