ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯ: ಈಟಿವಿ ಭಾರತ್ ಜೊತೆ ಅನುಭವ ಹಂಚಿಕೊಂಡ ವಿದ್ಯಾರ್ಥಿಗಳು - Corona virus update
ಚಿತ್ರದುರ್ಗ: ಕೊರೊನಾ ರಣಕೇಕೆ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯಗೊಂಡಿದ್ದು, ಪೋಷಕರು, ಮಕ್ಕಳು ಸೇರಿದಂತೆ ಸರ್ಕಾರ ಕೂಡಾ ನಿಟ್ಟುಸಿರು ಬಿಟ್ಟಿದೆ. ಇಂದು ಹಿಂದಿ ಭಾಷಾ ವಿಷಯಕ್ಕೆ ನಡೆದ ಅಂತಿಮ ಪರೀಕ್ಷೆಯ ಬಳಿಕ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡರು.