ಗೃಹ ವಾಸ ಮುಗಿಸಿ ತರಗತಿಯತ್ತ ಅಭ್ಯಾಸಕ್ಕೆ ಮರಳಿದ ವಿದ್ಯಾರ್ಥಿಗಳು - ಶಾಲಾ ಕಾಲೇಜು ಪುನಾರಾರಂಭ
ಚಿಕ್ಕಮಗಳೂರು : ಕೊರೊನಾ ವೈರಸ್ ಹಿನ್ನೆಲೆ ಕಳೆದ ಏಳೆಂಟು ತಿಂಗಳಿನಿಂದ ಬಾಗಿಲು ಹಾಕಿದ್ದ ಶಾಲೆಗಳು, ಇಂದಿನಿಂದ ಸರ್ಕಾರದ ಮಾರ್ಗ ಸೂಚಿಗಳನ್ನ ಪಾಲಿಸಿ ಮತ್ತೆ ತೆರೆದಿವೆ. ಬಹು ಸಮಯದ ಬಳಿಕ ಮಕ್ಕಳು ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ನಗರದ ಬಸವನಹಳ್ಳಿ ಶಾಲೆಯಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿರುವ ವಿದ್ಯಾರ್ಥಿಗಳು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಪಾಠ ಕೇಳುತ್ತಿದ್ದಾರೆ..