ದೇಶ ಬೆಳಗುವ ಬಾಲಕನ ಮನೆಗಿಲ್ಲ ಬೆಳಕು! ಬೀದಿ ದೀಪದಡಿ ಓದಿ ಅಂಬೇಡ್ಕರ್ ನೆನಪಿಸಿದ ವಿದ್ಯಾರ್ಥಿ - ಗದಗ ಸುದ್ದಿ
ಗದಗ ನಗರದ ಸಾಯಿಬಾಬಾ ಮಂದಿರದ ಪಕ್ಕದಲ್ಲಿರುವ ಗುಡಿಸಲಿನಲ್ಲಿನ ವಿದ್ಯಾರ್ಥಿಯೋರ್ವ ಬೀದಿ ದೀಪದ ಕೆಳಗೆ ಓದುತ್ತಿದ್ದಾನೆ. ತಮ್ಮ ಗುಡಿಸಲಿನಲ್ಲಿ ವಿದ್ಯುತ್ ದೀಪ ಇಲ್ಲದಿರುವುದರಿಂದ ರಾತ್ರಿಯಾದ್ರೆ ಸಾಕು, ಪ್ರತಿ ದಿನ ಅಭ್ಯಾಸಕ್ಕಾಗಿ ಪಕ್ಕದ ಬೀದಿ ದೀಪದ ಮೊರೆ ಹೋಗ್ತಾನೆ. ಜಗತ್ತು ಎಷ್ಟೇ ಮುಂದುವರಿದರೂ ಸಮಾಜದ ಕೆಲ ವರ್ಗ ಬಡತನದ ಕರಿನೆರಳಿನಲ್ಲೇ ಬದುಕುತ್ತಿರುವುದಕ್ಕೆ ಈ ಬಾಲಕನ ಕುಟುಂಬವೇ ಸಾಕ್ಷಿ. ಈ ಬಾಲಕ ಚೆನ್ನಾಗಿ ಕಲಿತು ಕುಟುಂಬಕ್ಕೆ ಆಸರೆಯಾಗಬೇಕೆಂಬ ಕನಸು ಹೊತ್ತಿದ್ದಾನೆ. ಇನ್ನೊಂದೆಡೆ, ಈತನ ತಂದೆ-ತಾಯಿಗೂ ಮಗನನ್ನು ಚೆನ್ನಾಗಿ ಓದಿಸಬೇಕೆಂಬ ಹಂಬಲ ಇದ್ರೂ ಬಡತನ ಇವೆಲ್ಲದಕ್ಕೂ ಅಡ್ಡಿಯಾಗಿದೆ. ಈ ಬಡ ಕುಟುಂಬದೊಂದಿಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.