ಪ್ರಾಚೀನ ಕ್ರೀಡೆ ಮಲ್ಲಕಂಬಕ್ಕೆ ಮಾರು ಹೋದ ಗಣ್ಯರು: ವಿದ್ಯಾರ್ಥಿಗಳಿಂದ ಅದ್ಭುತ ಪ್ರದರ್ಶನ - ಪ್ರಾಚೀನ ಮಲ್ಲಕಂಬ ಕಲೆ
ಮಲ್ಲ ಕಂಬ ಕ್ರೀಡೆಯು ಪ್ರಾಚೀನ ಕ್ರೀಡೆಯಾಗಿ ಇಂದಿಗೂ ನಮ್ಮ ಕಣ್ಣ ಮುಂದೆ ಇದೆ. ವಿವಿಧ ಭಂಗಿಗಳನ್ನು ಕಂಬದ ಮೇಲೆ ಪ್ರದರ್ಶಿಸುವ ಮೂಲಕ ಗಮನ ಸೆಳೆಯುವ ಕ್ರೀಡೆ ಇದು. ಇಂತಹ ಕ್ರೀಡೆಯು ಬಾಗಲಕೋಟೆ ಜಿಲ್ಲೆಯಲ್ಲಿ ತುಂಬಾ ಪ್ರಖ್ಯಾತಿ ಪಡೆಯುತ್ತಿದೆ. ನಿನ್ನೆ ನಡೆದ ರಾಜ್ಯೋತ್ಸವ ಹಿನ್ನೆಲೆ ನವನಗರದ ಕ್ರೀಡಾಂಗಣದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಗಣ್ಯ ವ್ಯಕ್ತಿಗಳ ಹಾಗೂ ಸಾರ್ವಜನಿಕ ಮುಂದೆ ಮಲ್ಲಕಂಬ ಪ್ರದರ್ಶನ ಏರ್ಪಡಿಸಲಾಗಿತ್ತು, ಈ ವೇಳೆ ವಿದ್ಯಾರ್ಥಿಗಳು ಹಲವು ಬಗೆಯ ಭಂಗಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿ ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾದರು.