ದಿನಸಿಗೆ ಅಧಿಕ ದರ ವಸೂಲಿ ಮಾಡಿದರೆ ಕಟ್ಟುನಿಟ್ಟಿನ ಕ್ರಮ: ಮಿನಿಸ್ಟರ್ ಎಚ್ಚರಿಕೆ - ದಕ್ಷಿಣಕನ್ನಡ ಸುದ್ದಿ
ದಕ್ಷಿಣಕನ್ನಡ: ಅಗತ್ಯ ವಸ್ತುಗಳಿಗೆ ನಿಗದಿತ ದರಕ್ಕಿಂತ ಅಧಿಕ ವಸೂಲಿ ಮಾಡಿದರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆಯ ಬಳಿಕ ಸಚಿವರು ಈ ವಾರ್ನಿಂಗ್ ಕೊಟ್ಟಿದ್ದಾರೆ. ಪರವಾನಗಿ ಪಡೆದೂ ದಾಸ್ತಾನು ಇಟ್ಟವರು ಕಡ್ಡಾಯವಾಗಿ ಅಂಗಡಿಯನ್ನು ಮಾರ್ಚ್ 31ರಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 3ರವರೆಗೆ ತೆರೆಯಬೇಕು ಎಂದು ಸೂಚಿಸಿದ್ದಾರೆ.