ಬೆಂಗಳೂರು ಗಲಭೆ ಸಂಬಂಧಿಸಿದಂತೆ ತನಿಖೆ ಆರಂಭ: ಡಿಸಿಎಂ ಅಶ್ವತ್ಥ್ನಾರಾಯಣ - ಬೆಂಗಳೂರು ಗಲಭೆ
ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧ ಪಟ್ಟಂತೆ ಈಗಾಗಲೇ ತನಿಖೆ ಆರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿರುವ ಪೋಸ್ಟ್ ಕುರಿತಾಗಿ ಕೂಡ ಮಾಹಿತಿ ಸಂಗ್ರಹಿಸಲಾಗುತ್ತದೆ. ಅಲ್ಲದೆ ಇಂತಹ ಗಲಭೆಗೆ ಪ್ರಚೋದನೆ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಬೆಂಗಳೂರಿನ ಜನರು ಶಾಂತಿ ಕಾಪಾಡುವಂತೆ ಉಪ ಮುಖ್ಯಮಂತ್ರಿ ಅಶ್ವತ್ಥ್ನಾರಾಯಣ ಮನವಿ ಮಾಡಿದರು.