ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳಿಂದ ಬೀದಿ ನಾಟಕದ ಮೂಲಕ ಜಾಗೃತಿ - ಕೆ.ಎ. ಲೋಕಾಪುರ ಡಿಗ್ರಿ ಕಾಲೇಜು
ಚಿಕ್ಕೋಡಿ: ನೊವಾರ್ಟಿಸ್ ಆರೋಗ್ಯ ಪರಿವಾರ ಸಂಸ್ಥೆ ಹಾಗೂ ಜೆಇ ಸಂಸ್ಥೆಯ ಕೆ.ಎ.ಲೋಕಾಪುರ ಡಿಗ್ರಿ ಕಾಲೇಜು ಅಥಣಿ ಇವರ ಸಂಯುಕ್ತಾಶ್ರಯದಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶನ ಮಾಡಲಾಯಿತು. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಪ್ರದರ್ಶನ ಆಯೋಜಿಸಲಾಗಿತ್ತು. ಕೆ.ಎ.ಲೋಕಾಪೂರ ಅಥಣಿ ಡಿಗ್ರಿ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಬೀದಿ ನಾಟಕ ಮಾಡುವುದರ ಮೂಲಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.