ರಸ್ತೆಗೆ ಬಂದ ಕಂದಮ್ಮನ ಮೇಲೆ ಬೀದಿ ನಾಯಿ ದಾಳಿ: ವಿಡಿಯೋ ವೈರಲ್
ಶಿವಮೊಗ್ಗ: ಬೀದಿ ನಾಯಿಯೊಂದು ಕಂದಮ್ಮನ ಮೇಲೆ ಎರಗಿ ಗಾಯಗೊಳಿಸಿರುವ ವಿಡಿಯೋ ವೈರಲ್ ಆಗಿದೆ. ನಗರದ ಆರ್.ಎಂ.ಎಲ್ ನಗರದಲ್ಲಿ 4 ವರ್ಷದ ಯಾದವಿ ಎಂಬ ಮಗುವಿನ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ. ತಕ್ಷಣ ಮನೆ ಒಳಗೆ ಇದ್ದ ಪೋಷಕರು ಬಂದು ನಾಯಿಯನ್ನು ಓಡಿಸಿ, ಯಾದವಿಯನ್ನು ರಕ್ಷಿಸಿದ್ದಾರೆ. ಯಾದವಿ ತನ್ನ ಅತ್ತೆ ಮನೆಗೆ ಬಂದಾಗ ಘಟನೆ ನಡೆದಿದೆ. ಮಗುವನ್ನು ಮೆಗ್ಗಾನ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.