10 ಜನರಿಂದ ಅರಂಭವಾದ ಸಂಸ್ಥೆಯಲ್ಲಿ ಈಗ 534 ಷೆರುದಾರರು... ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಈ ಗ್ರಾಮ - ರಾಣೆಬೆನ್ನೂರು ಲೇಟೆಸ್ಟ್ ನ್ಯೂಸ್
ರಾಣೆಬೆನ್ನೂರು: ದಿನನಿತ್ಯ ಇನ್ನೊಬ್ಬರ ಜಮೀನಿನಲ್ಲಿ ದುಡಿಯುವ ರೈತರು. ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುವ ಮಹಿಳಾ ಕೂಲಿಕಾರರು, ಸಣ್ಣ-ಪುಟ್ಟ ವ್ಯಾಪಾರ ಮಾಡುತ್ತಿದ್ದ ಮಧ್ಯಮ ವರ್ಗದ ವರ್ತಕರು. ಇವರೆಲ್ಲಾ ಸೇರಿ ಸಂಘಟಿಸಿದ ಸಂಸ್ಥೆ ಇದೀಗ ರಾಜ್ಯದ ಜನರೇ ತಿರುಗಿ ನೋಡುವಂತೆ ಮಾಡಿದೆ. 10 ಜನರಿಂದ ಆರಂಭವಾದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಇಟಗಿ ಗ್ರಾಮದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇದೀಗ 534 ಷೇರುದಾರರನ್ನ ಹೊಂದಿದ್ದು, 30 ಲಕ್ಷ ರೂಪಾಯಿ ವ್ಯವಹಾರ ಮಾಡುವ ಮೂಲಕ ಉಳಿದ ಸಂಘ ಸಂಸ್ಥೆಗಳು ತಿರುಗಿ ನೋಡುವಂತೆ ಮಾಡಿದೆ.