ಕರ್ನಾಟಕ

karnataka

ETV Bharat / videos

ಅಂಗಡಿ ಕಳ್ಳತನಕ್ಕೆ ಬಂದ ಕಳ್ಳರಿಂದ ಟೀ ಕಾಯಿಸುವ ಯತ್ನ... ಸಿಸಿವಿವಿಯಲ್ಲಿ ವಿಡಿಯೋ - ಅಂಗಡಿ ಕಳ್ಳತನ ಸುದ್ದಿ

By

Published : Jan 22, 2021, 12:53 AM IST

ನೆಲಮಂಗಲ: : ಕಾಂಡಿಮೆಂಟ್ಸ್​​​ ಅಂಗಡಿಯಲ್ಲಿ 4,500 ರೂಪಾಯಿ ಹಣ ಕದ್ದ ಕಳ್ಳರು ತದನಂತರ ಟೀ ಕಾಯಿಸಲು ಯತ್ನಿಸಿರುವ ಘಟನೆ ನಡೆದಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಜನವರಿ 18 ರಂದು ಕಡಬಗೆರೆ ಕ್ರಾಸ್ ಬಳಿಯ ಬ್ರಾಹ್ಮಿ ಕಾಂಡಿಮೆಂಟ್ಸ್​​​ಗೆ ಬೆಳಗಿನ ಜಾವ 3:30ರ ವೇಳೆ ಅಂಗಡಿ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕ್ಯಾಶ್ ಬಾಕ್ಸ್​ನಲ್ಲಿದ್ದ 4500 ರೂ ಹಣ, ಎಟಿಎಂ, ಪಾನ್ ಕಾರ್ಡ್, ಆಧಾರ್ ಕಾರ್ಡ್​ ಕಳ್ಳತನ ಮಾಡಿದ್ದಾರೆ. ಇದಾದ ಬಳಿಕ ಟೀ ಅಂಗಡಿಯಲ್ಲಿದ್ದ ಸ್ಟೌವ್ ಮೇಲೆ ಟೀ ಕಾಯಿಸಲು ಮುಂದಾಗಿದ್ದಾರೆ. ಆದರೆ ಆದರೆ ಅಂಗಡಿ ಮಾಲೀಕ ಸಿಲಿಂಡರ್ ಕನೆಕ್ಷನ್​ ತೆಗೆದಿರುವ ಕಾರಣ ಇದು ಸಾಧ್ಯವಾಗಿಲ್ಲ. ಅಂಗಡಿ ಮಾಲೀಕ ಉದಯ್ ಶೆಟ್ಟಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details