ಮೈಸೂರು: ರೈಲ್ವೆ ನಿಲ್ದಾಣದಲ್ಲಿ ಕೋವಿಡ್ ಜಾಗೃತಿಗಿಳಿದಿವೆ ಪ್ರತಿಮೆಗಳು - Mysuru covid
ಮೈಸೂರು: ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂಬ ಜಾಗೃತಿ ಮೂಡಿಸುತ್ತಿರುವ ಸಮುದಾಯಕ್ಕೆ ಮೈಸೂರು ರೈಲ್ವೆ ನಿಲ್ದಾಣ ಪ್ರತಿಮೆಗಳೂ ಸೇರಿಕೊಂಡಿವೆ. ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಸುಖಕರ ಪ್ರಯಾಣಕ್ಕೆ ರೈಲ್ವೆ ಬಳಸಿ ಎಂಬ ಸಂದೇಶವನ್ನು ಸಾರಲು 2019ರಲ್ಲಿ ನಿರ್ಮಿಸಲಾಗಿದ್ದ ಪ್ರತಿಮೆಗಳು ಈಗ ಕೋವಿಡ್ ಜಾಗೃತಿಗೂ ಬಳಕೆಯಾಗುತ್ತಿವೆ. ಅಲ್ಲಿನ ಎಲ್ಲಾ ಪ್ರತಿಮೆಗಳಿಗೂ ಮಾಸ್ಕ್ ಹಾಕಿ ಜನರಲ್ಲಿ ಜಾಗೃತಿಗೆ ಮುಂದಾಗಿದ್ದಾರೆ.