ಕರ್ನಾಟಕ

karnataka

ETV Bharat / videos

ಭಿಕ್ಷುಕರು, ಮಂಗಳಮುಖಿಯರಿಂದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಗೆ ಪೋಸ್ಟರ್​ ಬಿಡುಗಡೆ... - mysore State-level race pair of carts poster release

By

Published : Feb 3, 2021, 10:26 AM IST

ಮೈಸೂರು: ರಾಜ್ಯಮಟ್ಟದ ಜೋಡಿಎತ್ತಿನ ಗಾಡಿ ಓಟದ ಸ್ಪರ್ಧೆ ಪೋಸ್ಟರ್​ನ್ನು ಚೌಡೇಶ್ವರಿ ಸ್ನೇಹ ಬಳಗದ ಸದಸ್ಯರು ವಿಶೇಷ ಹಾಗೂ ವಿಭಿನ್ನವಾಗಿ ಬಿಡುಗಡೆ ಮಾಡಿದರು. ಮಾರ್ಚ್ 28 ರಂದು ನಡೆಯಲಿರುವ ರಾಜ್ಯಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಗೆ, ಮಂಗಳಮುಖಿಯರು ಮತ್ತು ಭಿಕ್ಷುಕರ ಮುಖಾಂತರ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಎತ್ತಿನಗಾಡಿ ಓಟಕ್ಕೆ ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಂದು ಚಾಲನೆ ನೀಡುವರು. ಪೋಸ್ಟರ್ ಬಿಡುಗಡೆ ಬಳಿಕ ಮಾತನಾಡಿದ ಚೌಡೇಶ್ವರಿ ಸ್ನೇಹ ಬಳಗದ ಅಧ್ಯಕ್ಷ ಆರ್. ಮಣಿಕಂಠರಾಜ್ ಗೌಡ, ಭಿಕ್ಷುಕರು ಮತ್ತು ಮಂಗಳಮುಖಿಯರನ್ನು ಹಗುರವಾಗಿ ಕಾಣದೆ. ಮುಂದಿನ ದಿನಗಳಲ್ಲಿ ಎಲ್ಲರಂತೆ ಬದುಕುವ ಸ್ಫೂರ್ತಿ, ಆಶಾಭಾವನೆಯನ್ನು ತುಂಬುವ ಉದ್ದೇಶದಿಂದ ಈ ರೀತಿ ಮಾಡಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ 50ಕ್ಕೂ ಹೆಚ್ಚು ರಾಸುಗಳು ಭಾಗಿಯಾಗಲಿವೆ ಎಂದರು.

ABOUT THE AUTHOR

...view details