ರಾಜ್ಯ ಬಜೆಟ್; ಗದಗ ಜಿಲ್ಲೆಯ ಜನರ ನಿರೀಕ್ಷೆಗಳೇನು? - ರಾಜ್ಯ ಬಜೆಟ್ ಗದಗ ಜಿಲ್ಲೆಯ ಜನರ ನಿರೀಕ್ಷೆಗಳೇನು
ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸುತ್ತಿದ್ದು, ಈ ಬಾರಿಯಾದರೂ ಮುದ್ರಣ ಕಾಶಿ ಗದಗ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡ್ತಾರಾ ಅನ್ನೋದು ಇಲ್ಲಿನ ಜನರ ನಿರೀಕ್ಷೆ. ಸತತ ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಯಲ್ಲಿ ಪ್ರವಾಹ ಜನರ ನೆಮ್ಮದಿ ಕಸಿದುಕೊಂಡಿತ್ತು. ಹೀಗಾಗಿ ನೆರೆ ಹಾನಿಗೆ ಪರಿಹಾರ, ಜವಳಿ ಪಾರ್ಕ್ ಸೇರಿದಂತೆ ಹಲವು ಬೇಡಿಕೆಗಳನ್ನು ಜನರು ಸರ್ಕಾರದ ಮುಂದಿಟ್ಟಿದ್ದಾರೆ.