ಕೇಂದ್ರ ಬಜೆಟ್ ಮಧ್ಯಮ ವರ್ಗದವರಿಗೆ ಅನುಕೂಲಕರ: ಬಿ.ರಾಮಕೃಷ್ಣ ಅಭಿಪ್ರಾಯ - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020
ಬಡ ಹಾಗೂ ಮಧ್ಯಮ ವರ್ಗಕ್ಕೆ ಈ ಬಾರಿಯ ಕೇಂದ್ರ ಬಜೆಟ್ ತುಂಬಾ ಅನುಕೂಲಕರವಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನೌಕರರ ಸಂಘದ ಪ್ರಾಂತೀಯ ವಲಯದ ಉಪಾಧ್ಯಕ್ಷ ಬಿ.ರಾಮಕೃಷ್ಣ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಈಟಿವಿ ಭಾರತದೊಂದಿಗೆ ಅವರು ಮಾತನಾಡಿ, ಕಳೆದ ಬಾರಿ ಮಂಡಿಸಲಾದ ಬಜೆಟ್ಗಿಂತಲೂ ಈ ಬಾರಿಯ ಬಜೆಟ್ ಉತ್ತಮವಾಗಿದ್ದು, ತೆರಿಗೆ ವಿನಾಯಿತಿ ಹೆಚ್ಚಳ ಸೇರಿದಂತೆ ಇನ್ನಿತರೆ ವಲಯಗಳ ಶ್ರೇಯೋಭಿವೃದ್ಧಿಗೆ ಈ ಬಜೆಟ್ ಪೂರಕ ಆಗಿದೆ ಎಂದ್ರು.