ಮೈಸೂರು ರೈಲ್ವೆ ನಿಲ್ದಾಣದ ವಿಂಟೇಜ್ ಗಡಿಯಾರ ರಿಪೇರಿ ಮಾಡಿದ ಸಿಬ್ಬಂದಿ - ಮೈಸೂರು ರೈಲ್ವೆ ನಿಲ್ದಾಣದ ವಿಂಟೇಜ್ ಗಡಿಯಾರವನ್ನು ರಿಪೇರಿ ಮಾಡಿದ ಸಿಬ್ಬಂದಿ
ಮೈಸೂರು: ಕಳೆದ 7 ತಿಂಗಳಿಂದ ಕೆಟ್ಟು ನಿಂತಿದ್ದ ವಿಂಟೇಜ್ ಗಡಿಯಾರವನ್ನು ರೈಲ್ವೆ ಇಲಾಖೆಯ ಮೆಕ್ಯಾನಿಕ್ ಸರಿಪಡಿಸಿದ್ದಾರೆ. ನಗರದ ಪಾರಂಪರಿಕ ರೈಲ್ವೆ ನಿಲ್ದಾಣದ ಫ್ಲಾಟ್ಫಾರಂ 1ರಲ್ಲಿ ಸುಮಾರು 50 ವರ್ಷಗಳಿಗಿಂತ ಹಳೆಯಾದಾದ ವಿಂಟೇಜ್ ಗಡಿಯಾರ ಕಳೆದ ಜನವರಿ ತಿಂಗಳಲ್ಲೇ ಕೆಟ್ಟು ನಿಂತಿತ್ತು. ಇದನ್ನು ರಿಪೇರಿ ಮಾಡಿಸಲು ಯಾವ ಮೆಕ್ಯಾನಿಕ್ಗೂ ಸಾಧ್ಯವಿಲ್ಲ ಎನ್ನಲಾಗಿತ್ತು. ಆದರೆ, ಮೈಸೂರು ರೈಲ್ವೆ ನಿಲ್ದಾಣದ ಗ್ಯಾರೇಜ್ನಲ್ಲಿ ಕೆಲಸ ಮಾಡುವ ನೌಕರರೇ ಅದನ್ನು ಸರಿಪಡಿಸಿ ಅದೇ ಜಾಗಕ್ಕೆ ಅಳವಡಿಸಿದ್ದಾರೆ. ಆ ಮೂಲಕ ಪಾರಂಪರಿಕ ರೈಲ್ವೆ ನಿಲ್ದಾಣದಲ್ಲಿ ಮತ್ತೆ ಪಾರಂಪರಿಕ ಗಡಿಯಾರದ ಅಳವಡಿಕೆಯಾಗಿದೆ.