ಅಧಿಕಾರಿಗಳ ಎಡವಟ್ಟು ಆರೋಪ.. ಕಬಿನಿ ಹೊರ ಹರಿವಿನ ಹೆಚ್ಚಳದಿಂದ ಬೆಚ್ಚಿದ ಸ್ಥಳೀಯರು - Kabini dam latest news
ಮೈಸೂರು: ಕಬಿನಿ ಜಲಾಶಯ ಭರ್ತಿಯಾಗ್ತಿದೆ ಎಂದು ಮಾಹಿತಿ ನೀಡದೆ ನದಿಗೆ ನೀರು ಬಿಟ್ಟ ಅಧಿಕಾರಿಗಳ ಎಡವಟ್ಟಿಗೆ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ. ಗೇಟ್ ಹಾಕದೆ, ಸೈರನ್ ಮಾಡದೆ, ಮಾಹಿತಿ ನೀಡದೆ ಏಕಾಏಕಿ ಅಧಿಕಾರಿಗಳು ನದಿಗೆ ನೀರು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪರಿಣಾಮ ಜಲಾಶಯದ ಮುಂಭಾಗ ಇರುವ ಸೇತುವೆ ನೀರಿನ ರಭಸಕ್ಕೆ ಮುಳುಗಿದ್ದರಿಂದ ಗ್ರಾಮಸ್ಥರು ಸಂಚಾರ ಮಾಡಲು ಪರದಾಡುವಂತಾಯಿತು. ಕೂಡಲೇ ಡ್ಯಾಂನ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ, ಎಚ್ಚೆತ್ತು ನೀರಿನ ಪ್ರಮಾಣ ಕಡಿಮೆ ಮಾಡಿದ್ದಾರೆ.