ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಕಾರ್ಡ್ ನೀಡಲು ಸಿಬ್ಬಂದಿ ಲಂಚ ಆರೋಪ: ವಿಡಿಯೋ ವೈರಲ್ - ವೈರಲ್ ವಿಡಿಯೋಗಳು
ರಾಯಚೂರು: ಬಾಣಂತಿಯರಿಗೆ ತಾಯಿ ಕಾರ್ಡ್ ನೀಡಲು ಆರೋಗ್ಯ ಇಲಾಖೆಯ ಸಿಬ್ಬಂದಿ ಲಂಚದ ಬೇಡಿಕೆ ಇಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿರುವವರು ರಾಯಚೂರು ಜಿಲ್ಲೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಂದು ಆರೋಪಿಸಲಾಗುತ್ತಿದೆ. ಘಟನೆ ಯಾವಾಗ ನಡೆದಿದೆ ಎನ್ನುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.