ಸಿದ್ದರಾಮಯ್ಯರಿಗೆ ವೀರಾವೇಶದಿಂದಲೇ ಆಡಳಿತ ಪಕ್ಷ ಉತ್ತರ ಕೊಡಲಿದೆ: ಸಚಿವ ಸೋಮಶೇಖರ್ - ಸಚಿವ ಸೋಮಶೇಖರ್ ಲೇಟೆಸ್ಟ್ ನ್ಯೂಸ್
ಮೈಸೂರು: ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಆಡಳಿತ ಪಕ್ಷವು ವೀರಾವೇಶದಿಂದಲೇ ಉತ್ತರ ಕೊಡಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಭಾಷಣದ ಮೂಲಕ ವೀರಾವೇಶ ತೋರಿಸಿದ್ದಾರೆ. ಅಧಿವೇಶನದಲ್ಲಿ ಮಾತನಾಡಲಿ. ಅವರಿಗೆ ವೀರಾವೇಶದಿಮದಲೇ ಉತ್ತರಿಸುವ ಶಕ್ತಿ ದೇವರು ನಮಗೂ ಕೊಟ್ಟಿದ್ದಾನೆ. ಪ್ರತಿಪಕ್ಷದ ಟೀಕೆಗಳಿಗೆ ನಾವು ಉತ್ತರ ಕೊಡುತ್ತೇವೆ ಎಂದಿದ್ದಾರೆ.