ಹುಣಸೂರು ಪ್ರತ್ಯೇಕ ಜಿಲ್ಲೆ ಪ್ರಸ್ತಾಪ ರಾಜಕೀಯ ಪ್ರೇರಿತ: ಸಾ.ರಾ. ಮಹೇಶ್ - SRMahesh
ಚುನಾವಣೆ ದಿನಾಂಕ ನಿಗದಿಯಾದ ಮೇಲೆ ಹುಣಸೂರು ಕ್ಷೇತ್ರವನ್ನು ಹೊಸ ಜಿಲ್ಲೆಯನ್ನಾಗಿ ಮಾಡಬೇಕೆಂಬ ಪ್ರಸ್ತಾಪ ರಾಜಕೀಯ ಪ್ರೇರಿತವಾದದ್ದು. ಈ ಪ್ರಸ್ತಾಪ ಮಾಡಿರುವ ಅನರ್ಹ ಶಾಸಕರಿಗೂ ಹುಣಸೂರು ಕ್ಷೇತ್ರಕ್ಕೂ ಸಂಬಂಧವಿಲ್ಲ. 14 ತಿಂಗಳು ಶಾಸಕರಾಗಿದ್ದಾಗ ಹೊಸ ಜಿಲ್ಲೆಯನ್ನು ಮಾಡಲು ಚರ್ಚೆ ಮಾಡಬಹುದಿತ್ತು. ರಾಜ್ಯದ ಮುಖ್ಯಮಂತ್ರಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಹೆಚ್ ವಿಶ್ವನಾಥ್ ವಿರುದ್ಧ ಕಿಡಿಕಾರಿದ್ದಾರೆ.