ಪ್ರಧಾನಿ ಕರೆಗೆ ಶ್ರೀಶೈಲ ಶ್ರೀಗಳ ಬೆಂಬಲ: ಜಾತ್ಯತೀತವಾಗಿ ಬೆಂಬಲಿಸುವಂತೆ ಮನವಿ - corona prevention
ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ದೀಪ ಪ್ರಜ್ವಲನಕ್ಕೆ ಕರೆ ನೀಡಿರುವುದನ್ನು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ಚಾಮೀಜಿ ಬೆಂಬಲಿಸಿದ್ದಾರೆ. ಕತ್ತಲೆಯು ರೋಗ, ದಾರಿದ್ರ್ಯದ ಸಂಕೇತ. ದೀಪ ಆರೋಗ್ಯ, ಉತ್ಸಾಹದ ಸಂಕೇತ. ಕತ್ತಲೆ ಒಂಟಿತನ, ದೀಪ ಒಗ್ಗಟ್ಟಿನ ಸಂಕೇತ. 9 ಪರಿಪೂರ್ಣತೆ ಸಂಕೇತ, ಪ್ರಧಾನಿಗಳ ಕರೆಗೆ ಜಾತ್ಯತೀತ, ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.