ಸಂಭ್ರಮದಿಂದ ಜರುಗಿದ ಶ್ರೀರೇಣುಕಾ ಯಲ್ಲಮ್ಮನ ಜಾತ್ರಾ ಮಹೋತ್ಸವ.. - ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಾತಪಳ್ಳಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವ
ರಾಯಚೂರು: ಶ್ರೀರೇಣುಕಾ ಯಲ್ಲಮ್ಮನ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ಪುನೀತರಾದರು. ಎಲ್ಲಿ ನೋಡಿದರಲ್ಲಿ ಉಧೋ ಉಧೋ ಎಂಬ ನಾಮಸ್ಮರಣೆ, ಕಣ್ಣು ಹಾಯಿಸಿದಷ್ಟು ಜನಸಾಗರ. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಾತಪಳ್ಳಿ ಗ್ರಾಮದಲ್ಲಿ.