ಕರ್ನಾಟಕ

karnataka

ETV Bharat / videos

ಹೆಬ್ಬಾವಿನ ಮರಿ ರಕ್ಷಿಸಿದ ಉಡುಪಿಯ ವಿಶ್ವಪ್ರಸನ್ನ ತೀರ್ಥರು - ವಿಡಿಯೋ - ಪೇಜಾವರ ಮಠ

By

Published : Jun 16, 2020, 6:28 PM IST

ಉಡುಪಿ: ಬ್ರಹ್ಮಾವರ ತಾಲೂಕಿನ ಪೇಜಾವರ ಮಠದಲ್ಲಿ ಸಿಲುಕಿಕೊಂಡಿದ್ದ ಹೆಬ್ಬಾವಿನ ಮರಿಯನ್ನು ಪೇಜಾವರ ಮಠದ ಯತಿ ಶ್ರೀ ವಿಶ್ವ ಪ್ರಸನ್ನ ತೀರ್ಥರು ರಕ್ಷಣೆ ಮಾಡಿದ್ದಾರೆ. ಶ್ರೀಗಳು ಹಾವಿನ ಮರಿಯನ್ನು ಹಿಡಿದು ಸಣ್ಣದೊಂದು ಪೈಪ್​ನಲ್ಲಿ ತುಂಬಿದ್ದಾರೆ. ನಂತರ ಅದನ್ನು ಮಠದ ತೋಟಕ್ಕೆ ತಂದುಬಿಟ್ಟಿದ್ದಾರೆ. ಸಾಮಾನ್ಯವಾಗಿ ಹೆಬ್ಬಾವು ಹತ್ತಾರು ಸಂಖ್ಯೆಯಲ್ಲಿ ಮೊಟ್ಟೆಯಿಟ್ಟು ಮರಿ ಮಾಡುತ್ತದೆ‌. ಹೆಬ್ಬಾವಿನ ಮರಿ ಸ್ವತಂತ್ರವಾಗಿ ಗುಂಪಿನಿಂದ ಬೇರ್ಪಟ್ಟು ಮಠದೊಳಗೆ ಬಂದು ದನಗಳ ಹಟ್ಟಿಯತ್ತ ಹೋಗಿತ್ತು. ಅದು ಹಸುಗಳ ಕಾಲಿನಡಿ ಸಿಲುಕಬಾರದೆಂದು ಸ್ವಾಮೀಜಿ ಹೆಬ್ಬಾವಿನ ಮರಿ ರಕ್ಷಣೆ ಮಾಡಿದ್ದಾರೆ.

ABOUT THE AUTHOR

...view details