ರಾಯಚೋಟಿ ಶ್ರೀ ವೀರಭದ್ರಸ್ವಾಮಿ ಗುಗ್ಗಳ, ಕಾರ್ತಿಕೋತ್ಸವ: ಸಹಸ್ರಾರು ಜನರು ಭಾಗಿ - ಆಂಧ್ರಪ್ರದೇಶದ ಶ್ರೀ ವೀರಭದ್ರಸ್ವಾಮಿ ಕಾರ್ತಿಕೋತ್ಸವ
ಬೆಂಗಳೂರು : ಆಂಧ್ರಪ್ರದೇಶದ ಸುಪ್ರಸಿದ್ಧ ರಾಯಚೋಟಿ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಹುಣ್ಣಿಮೆ ಪ್ರಯುಕ್ತ ದೇವರ ಕಲ್ಯಾಣೋತ್ಸವ, ಶರಭಿ ಗುಗ್ಗಳ, ಕಾರ್ತಿಕೋತ್ಸವ ವಿಜೃಂಭಣೆಯಿಂದ ನೆರವೇರಿತು. ರಾಜ್ಯ ಬಿಜೆಪಿ ಕಾರ್ಯದರ್ಶಿಯಾದ ರಾಣೆಬೆನ್ನೂರಿನ ಶ್ರೀಮತಿ ಭಾರತಿ .ಕೆ ಜಂಬಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಕಾರ್ತಿಕೋತ್ಸವದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ಸಹಸ್ರಾರು ಜನರ ಭಕ್ತವೃಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು. ಭಕ್ತರು ದೇವಸ್ಥಾನದಲ್ಲಿ ದೀಪಗಳನ್ನು ಸಾಲು ಸಾಲಾಗಿ ಹಚ್ಚಿ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯ ಮನಮೋಹಕವಾಗಿತ್ತು.
Last Updated : Nov 13, 2019, 7:06 PM IST