ಕರ್ನಾಟಕ

karnataka

ETV Bharat / videos

ಅದ್ಧೂರಿಯಾಗಿ ನೆರವೇರಿದ ಶ್ರೀ ಸೂಗೂರೇಶ್ವರ ಸ್ವಾಮಿ ಜೋಡು ರಥೋತ್ಸವ - ಅದ್ಧೂರಿಯಾಗಿ ನೆರವೇರಿದ ಶ್ರೀ ಸೂಗೂರೇಶ್ವರ ಸ್ವಾಮಿ ಜೋಡು ರಥೋತ್ಸವ

By

Published : Dec 2, 2019, 11:00 PM IST

ರಾಯಚೂರು: ಇಂದು ದೇವಸೂಗೂರಿನ ಶ್ರೀ ಸೂಗೂರೇಶ್ವರ ಸ್ವಾಮಿ ಜೋಡು ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಬೆಳಿಗ್ಗೆ ಶ್ರೀ ಸೂಗೂರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮಹಾಪೂಜೆ, ಎಲೆ ಪೂಜೆ, ನಂದಿ ಪೂಜೆ ಸೇರಿದಂತೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಸಂಜೆಯ ವೇಳೆ ಬೃಹತ್ ಹಾಗೂ ಬಗೆ ಬಗೆ ಹೂಗಳಿಂದ ಅಲಂಕಾರ ಮಾಡಿದ್ದ ಎರಡು ತೇರುಗಳಲ್ಲಿ ಶ್ರೀ ಸೂಗೂರೇಶ್ವರ ಸ್ವಾಮಿ ಉತ್ಸವ ಮೂರ್ತಿ ಇಟ್ಟು ಜೋಡು ತೇರುಗಗಳನ್ನು ಎಳೆಯಲಾಯಿತು. ವಿವಿಧ ಕಲಾತಂಡದ ನೃತ್ಯ, ಡೊಳ್ಳು, ವ್ಯಾದ ಮೇಳೆಗಳೊಂದಿಗೆ ಎರಡು ತೇರುಗಳು ರಥಬೀದಿಯಲ್ಲಿ‌ ಸಾಗಿದವು. ಜಾತ್ರೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ತೆಲಂಗಾಣ, ಸೀಮಾಂಧ್ರ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋ‌ಬಸ್ತ್ ಕೈಗೊಳ್ಳಲಾಗಿತ್ತು.

ABOUT THE AUTHOR

...view details